KANNADA NOTES LN 14 KELADI CHENNAMMA

ಪಾಠ - ೧೪ ವೀರರಾಣಿ ಕೆಳದಿ ಚೆನ್ನಮ್ಮ

One word sentences (ಒಂದು ವಾಕ್ಯದ ಉತ್ತರಗಳು)


Q1) ಚೆನ್ನಮ್ಮ ಎಲ್ಲಿ ಆಳುತ್ತಿದ್ದಳು? 

Ans: ಚೆನ್ನಮ್ಮ ಕೆಳದಿಯಲ್ಲಿ ಆಳುತ್ತಿದ್ದಳು.


Q2) ರಾಜಾರಾಮನು ಯಾರ ಮಗ? 

Ans: ರಾಜಾರಾಮನು ಛತ್ರಪತಿ ಶಿವಾಜಿಯ ಮಗ.


Q3) ಸಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದವನು ಯಾರು? 

Ans: ಸಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದವನು ಮೊಗಲರ ಸುಲ್ತಾನ ಔರಂಗಜೇಬ.


Q4) ರಾಜಾರಾಮನಿಗೆ ಯಾರೂ ರಕ್ಷಣೆ ನೀಡಲಿಲ್ಲ ಏಕೆ?

Ans: ಔರಂಗಜೇಬನಿಗೆ ಹೆದರಿ ರಾಜಾರಾಮನಿಗೆ ಯಾರೂ ರಕ್ಷಣೆ ನೀಡಲಿಲ್ಲ.


Q5) ಔರಂಗಜೇಬ ಏಕೆ ಕೋಪಗೊಂಡನು? 

Ans: ರಾಜಾರಾಮನಿಗೆ ಆಶ್ರಯ ನೀಡಿದ್ದರಿಂದ ಔರಂಗಜೇಬ ಕೋಪಗೊಂಡನು.


Q6) ಸಿದ್ಧಪ್ಪ ಶೆಟ್ಟರು ಸಭೆಯ ತೀರ್ಮಾನ ಏನೆಂದು ಹೇಳಿದರು? 

Ans: ಸಿದ್ಧಪ್ಪ ಶೆಟ್ಟರು "ಶರಣು ಬಂದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ. ದುಷ್ಟನಿಗೆ ಹೆದರಿ ಹಿಂದೆ ಸರಿಯುವುದಕ್ಕಿಂತ ಮುಂದುವರೆದು ಹೋರಾಡುವುದೇ ಲೇಸು" ಎಂದು ಸಭೆಯ ತೀರ್ಮಾನ ಹೇಳಿದರು.



Long Answers (ದೀರ್ಘ ಉತ್ತರಗಳು)


1) ರಾಜಾರಾಮನು ರಾಣಿ ಚೆನ್ನಮ್ಮನಿಗೆ ಸಭೆಯಲ್ಲಿ ಏನೆಂದು ಕೇಳಿಕೊಂಡನು? 

Ans: ರಾಜಾರಾಮನು ರಾಣಿ ಚೆನ್ನಮ್ಮನಿಗೆ ಸಭೆಯಲ್ಲಿ ಔರಂಗಜೇಬನು ತನ್ನ ಸಹೋದರ ಸಂಭಾಜಿಯನ್ನು ಕೊಂದು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದಾಗಿ, ಆತನಿಗೆ ಹೆದರಿ ತನಗೆ ಯಾರೂ ಆಶ್ರಯ ನೀಡುತ್ತಿಲ್ಲವೆಂತಲೂ, ಆದ್ದರಿಂದ ನಾನು ನಿಮ್ಮ ಆಶ್ರಯ ಬಯಸಿ ಬಂದಿರುವುದಾಗಿ ತಿಳಿಸಿದನು.


2) ಬೇಹುಗಾರನು ಬಂದು ರಾಣಿಯವರಿಗೆ ಏನೆಂದು ಹೇಳಿದನು? 

Ans: ಬೇಹುಗಾರನು ಬಂದು ರಾಣಿಯವರಿಗೆ "ನೀವು ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಬಹಳ ಕೋಪಗೊಂಡಿದ್ದಾನೆ. ರಾಜ್ಯವನ್ನು ಮುತ್ತಲು ಸೇನೆ ಕಳುಹಿಸಿದ್ದಾನೆ. ರಾಜಾರಾಮನನ್ನು ಔರಂಗಜೇಬನಿಗೆ ಒಪ್ಪಿಸಬೇಕಂತೆ ಇಲ್ಲವೇ ಯುದ್ಧಕ್ಕೆ ಸಿದ್ಧರಾಗಬೇಕಂತೆ" ಎಂದು ಹೇಳಿದನು.

Comments

Popular posts from this blog

Class 6 - ALGEBRA - Chapter 8 - Ex: 8 B & Ex 8 C

EXERCISE 5.1 - IN READABLE - Q AND A FORMAT

CHEMISTY - FILL IN THE BLANKS - Interactive Fill in the Blanks For chemistry